ಖಾಸಗಿ ಸಹಭಾಗಿತ್ವದಡಿಯಲ್ಲಿ ಕಿರು ಬಂದರುಗಳ ಅಭಿವೃದ್ಧಿ

• ಪಾವಿನಕುರ್ವೆ ಬಂದರು ಅಭಿವೃದ್ಧಿ :
ಸ್ವಿಸ್ ಚಾಲೆಂಜ್ ಮಾದರಿಯಲ್ಲಿ 10 MTPA ಸಾಮಥ್ರ್ಯದ ಬಂದರನ್ನು ರೂ.1767.00 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು M/s JSW, Mumbai ರವರು ವಿಸ್ತøತ ಯೋಜನಾ ವರದಿ (DPR) ಯನ್ನು ತಯಾರಿಸಿದ್ದು, ಅದನ್ನು I-Deck & IPA ರವರಿಂದ ಪರಿಶೀಲಿಸಿ, ಪರಿಷ್ಕರಿಸಿ, ಬಿಡ್ ಡಾಕ್ಯೂಮೆಂಟ್‍ಗಳೊಂದಿಗೆ ಸರ್ಕಾರದ ಅನುಮೋದನೆಗೆ ಸಲ್ಲಿಸಲಾಗಿದೆ. ಸರ್ಕಾರದಿಂದ ಸದರಿ ಬಿಡ್ ಡಾಕ್ಯೂಮೆಂಟ್‍ಗೆ ಸಂಬಂಧಿಸಿದಂತೆ ಕೆಲವೊಂದು ಸ್ಪಷ್ಟೀಕರಣ ಕೋರಿದ್ದು, ಈ ಬಗ್ಗೆ I-Deck ರವರಿಂದ ವರದಿ ಪಡೆದು ಸರ್ಕಾರದ ಮುಂದಿನ ಕ್ರಮಕ್ಕಾಗಿ ಸಲ್ಲಿಸಿದೆ.


• ಬೇಲೇಕೇರಿ ಬಂದರು ಅಭಿವೃದ್ಧಿ :
ಕೇಂದ್ರ ನೌಕಾಯಾನ ಮಂತ್ರಾಲಯವು ನವಮಂಗಳೂರು ಬಂದರಿಗೆ ಸೆಟಲೈಟ್ ಬಂದರಾಗಿ ಬೇಲೇಕೇರಿ ಬಂದರಿನ ದಕ್ಷಿಣದ ಕೇಣಿಯಲ್ಲಿ ಬಂದರನ್ನು ರೂ.1720.00 ಕೋಟಿ ವೆಚ್ಚದಲ್ಲಿ 10 MTPA  ಸಾಮಥ್ರ್ಯದಲ್ಲಿ ಅಭಿವೃದ್ಧಿಪಡಿಸಲು Techno Economic Feasibility Report (TEFR) ನ್ನು ತಯಾರಿಸಿದ್ದು, ಸದರಿ ಖಿಇಈಖ ಬಗ್ಗೆ ಸಹಮತವನ್ನು ವ್ಯಕ್ತಪಡಿಸಿ, ರಾಜ್ಯ ಸರ್ಕಾರದಿಂದ ಪತ್ರ ಬರೆಯಲಾಗಿರುತ್ತದೆ.


• ಹೊನ್ನಾವರ ಬಂದರು ಅಭಿವೃದ್ಧಿ :
10 MTPA  ಸಾಮಥ್ರ್ಯದಲ್ಲಿ ಬಂದರನ್ನು ಅಭಿವೃದ್ಧಿಪಡಿಸಲು 8,47,560ಚ.ಮೀ. ಬಂದರು ಭೂಮಿಯನ್ನು M/s Honnavar Port Pvt. Ltd., Hyderabad ರವರಿಗೆ ಗುತ್ತಿಗೆ ಆಧಾರದಲ್ಲಿ ನೀಡಲಾಗಿರುತ್ತದೆ. ಯೋಜನೆಗೆ ಸಂಬಂಧಿಸಿದ DPR ನ್ನು ತಯಾರಿಸಿ, EIA ಅನುಮತಿಯನ್ನು ಸಂಸ್ಥೆಯು ಪಡೆದುಕೊಂಡಿರುತ್ತದೆ. ಕಾಮಗಾರಿಗಳನ್ನು ಪ್ರಾರಂಭಿಸಲು ಬರ್ತ್, ಬ್ರೇಕ್‍ವಾಟರ್ ಮತ್ತು ಹೂಳೆತ್ತುವ ಕಾಮಗಾರಿಗಳ ವಿನ್ಯಾಸಗಳಿಗೆ ಇಲಾಖೆಯ ಅನುಮೋದನೆಯನ್ನು ನೀಡಲಾಗಿದೆ. ಸಂಸ್ಥೆಯು ಕಾಮಗಾರಿಗಳಿಗೆ ಬೇಕಾದ ಕಲ್ಲುಗಣಿಯ ಅನುಮತಿಯನ್ನು ಪಡೆಯಲಾಗಿದ್ದು, ಪ್ರಸಕ್ತ ಪ್ರಾಥಮಿಕ ಹಂತದ (Test Pile) ಕಾಮಗಾರಿ ಪ್ರಗತಿಯಲ್ಲಿದೆ.